ಕರಾವಳಿ ಭಾಗದ ಜನರಿಗೆ ಮತ್ತೊಂದು ಅಮೃತ್ ಭಾರತ್ ರೈಲು ಹಾಗೂ ಎಕ್ಸ್‌ಪ್ರೆಸ್ ರೈಲು ಸೇರಿ ಹೊಸ ಎರಡು ರೈಲುಗಳ ಸೇವೆ ಆರಂಭವಾಗುತ್ತಿದೆ.ದಕ್ಷಿಣ ರೈಲ್ವೆಯು ಈ ಹೊಸ ರೈಲುಗಳ ಸೇವೆ ಆರಂಭಿಸುತ್ತಿದ್ದು, ಕರ್ನಾಟಕ ಕೇರಳ ಹಾಗೂ ತಮಿಳುನಾಡಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ತಾಂಬರಂ (ಚೆನ್ನೈ) - ಮಂಗಳೂರು ನಡುವೆ ಅಮೃತ್ ಭಾರತ್ ರೈಲು, ರಾಮೇಶ್ವರ ಮಂಗಳೂರು ನಡುವೆ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 1 ಕ್ಕೆ ಈ ಹೊಸ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಒಟ್ಟು 4 ಹೊಸ ರೈಲಿಗೆ ಮೋದಿ ಚಾಲನೆ
ಮಾಚ್ 1 ರಂದು ದಕ್ಷಿಣ ರೈಲ್ವೆಗೆ ಸಂಬಂಧಿಸಿದ 4 ಹೊಸ ರೈಲುಗಳು ಹಾಗೂ 8 ಅಮೃತ್ ಭಾರತ್ ನಿಲ್ದಾಣಗಳ ಉದ್ಘಾಟನೆಯಾಗಲಿದೆ. ಪ್ರಧಾನಿ ಮೋದಿ ಅವರು ಮಧುರೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ರೈಲು ಹಾಗೂ ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ತಾಂಬರಂ (ಚೆನ್ನೈ) - ಮಂಗಳೂರು ಅಮೃತ್ ಭಾರತ್ ರೈಲು.
ನಾಗರಕೋವಿಲ್ - ಚರ್ಲಪಲ್ಲಿ ಅಮೃತ್ ಭಾರತ್ ರೈಲು.
ಕೋಯಮತ್ತೂರು - ದನ್‌ಬಾದ್ (ಜಾರ್ಖಂಡ್ ಅಮೃತ್ ಭಾರತ್ ರೈಲು.
ರಾಮೇಶ್ವರಂ - ಮಂಗಳೂರು ಎಕ್ಸ್‌ಪ್ರೆಸ್
ಹೊಸ ಅಮೃತ್ ಭಾರತ್ ನಿಲ್ದಾಣಗಳು
ಪೊಲ್ಲಾಚಿ
ಕಾರೈಕ್ಕುಡಿ ಜಂಕ್ಷನ್
ಶ್ರೀವಿಲ್ಲಿಪುತ್ತೂರು
ತಿರುವರೂರ್
ಮನಪ್ಪರೈ
ಮೊರಪ್ಪುರ್
ಬೋಮಿಡಿ
ಶೋಲವಂದನ
ಚೆನ್ನೈ ನಗರದಲ್ಲಿ ರೈಲ್ವೆ ಸಂಚಾರ ವೃದ್ಧಿ ನಿಟ್ಟಿನಲ್ಲಿ ಚೆನ್ನೈ ಬೀಚ್ ಮತ್ತು ಚೆನ್ನೈ ಎಗ್ಮೋರ್ ನಡುವಿನ ಎಂಎಸ್‌ಬಿ – ಎಂಎಸ್ 4ನೇ ಮಾರ್ಗವನ್ನು (4.3 ಕಿಮೀ) ಲೋಕಾರ್ಪಣೆ ಮಾಡಲಾಗುತ್ತಿದೆ. ಇದು ಚೆನ್ನೈನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಮಯಪಾಲನೆಯನ್ನು ಸುಧಾರಿಸುವ ಪ್ರಮುಖ ಹೆಜ್ಜೆ ಎನ್ನಲಾಗಿದೆ.
