ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಸಾಂ ವಿಶೆಂತ್ ಪಾವ್ಲ್ ಸಭಾದ ವಾರ್ಷಿಕ ಹಬ್ಬ ಆಚರಣೆ

|

ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ, ಬಡವರು, ಅಗತ್ಯವಿರುವವರು ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಕ್ಯಾಥೋಲಿಕ್ ಸೇವಾ ಸಂಘಟನೆಯಾದ ಸಾಂ ವಿಶೆಂತ್ ಪಾವ್ಲ್ ಸಭಾದ ವಾರ್ಷಿಕ ಹಬ್ಬವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಯಿತು.
ದಿವ್ಯ ಬಲಿಪೂಜೆಯನ್ನು ವಂದನೀಯ ರೆ ಫಾ ಗ್ರೆಶನ್ ಅಲ್ವಾರೀಸ್ ನೆರವೇರಿಸಿದರು.
ಬಲಿಪೂಜೆಯ ನಂತರ ಸಭಾ ಕಾರ್ಯಕ್ರಮ ನೆರವೆರಿತು. ವೇದಿಕೆಯಲ್ಲಿ ಧರ್ಮಗುರುಗಳಾದ ರೆ ಫಾ ಗ್ರೇಶನ್ ಅಲ್ವಾರೀಸ್,ದೇವಾಲಯದ ಪಾಲನ  ಸಮಿತಿ ಉಪಾಧ್ಯಕ್ಷರಾದ ಶ್ರೀ ಜೋನ್ ಮೊಂತೇರೊ , ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಡಿಸೋಜಾ, ಸರ್ವ ಆಯೋಗದ ಸಂಚಾಲಕಕರು ಶ್ರೀ ಪಾವ್ಲ್ ಡಿಸೋಜಾ, ಸಿ ಸುಪೀರಿಯರ್ ಜೆಸ್ಸಿ, ಸಾಂ ವಿಶೆಂತ್ ಪಾವ್ಲ್ ಸಭಾದ ಅಧ್ಯಕ್ಷರಾದ ಹರೀಶ್ ಡಿಸೋಜಾ ಹಾಗೂ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಡಿಸೋಜಾ ಉಪಸ್ಥಿತರಿದ್ದರು.ಶ್ರೀಮತಿ ಜೆಸಿಂತಾ ಡಿಸೋಜಾ ಸ್ವಾಗತಿಸಿದರು.
ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು.
ಸಾಂ ವಿಶೆಂತ್ ಪಾವ್ಲ್ ಸಭಾದ ಸಾಕು ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು. ಶ್ರೀ ರಾಜೇಶ್ ಡಿಸೋಜಾ ಧನ್ಯವಾದಸಲ್ಲಿಸಿದರು ಶ್ರೀ ಮಾರ್ಸೆಲ್ ಡಿಸೋಜಾ ನಿರೂಪಿಸಿದರು.