ನೆಲ್ಯಾಡಿ : ರಿಕ್ಷಾಕ್ಕೆ ತೂಪಾನ್ ಡಿಕ್ಕಿಯಾಗಿ ಗಾಯಗೊಂಡಿದ್ದ ಮಹಿಳೆ ಸಾವು

|

ನೆಲ್ಯಾಡಿ: ಏ.26ರಂದು ರಾತ್ರಿ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ತೂಫಾನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ  ಮಹಿಳೆ ಗಿರಿಜಾ (74 ವ.) ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ವಿಟ್ಲ ಕಸಬಾ ಗ್ರಾಮದ ಮಂಗಲಪದವು ಸುರುಳಿಮೂಲೆ ನಿವಾಸಿ ದೀಪಕ್ ಹಾಗೂ ಇತರರು ರಿಕ್ಷಾ ದಲ್ಲಿ ವಿಟ್ಲದಿಂದ ನೆಲ್ಯಾಡಿ ಕಡೆಗೆ ಬಂದು ಕೊಣಾಲು ಗ್ರಾಮದ ಕೋಲ್ಪೆ ಪೆಟ್ರೋಲ್ ಪಂಪ್ ಬಳಿ ರಾತ್ರಿ 2.30ರ ವೇಳೆಗೆ ನೀರು ಕುಡಿಯಲೆಂದು ಹೆದ್ದಾರಿ ಬದಿ ರಿಕ್ಷಾ ನಿಲ್ಲಿಸಿದ್ದು ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ತೂಫಾನ್  ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮುಂದಕ್ಕೆ ಚಲಿಸಿ ಕಾಂಕ್ರಿಟ್ ಚರಂಡಿಗೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ದೀಪಕ್, ಅವರ ಚಿಕ್ಕಪ್ಪ ಸೋಮಪ್ಪ, ಅತ್ತೆ ಗಿರಿಜಾ ಹಾಗೂ ರಿಕ್ಷಾ ಚಾಲಕ ಸೋಮಪ್ಪ ಅವರ ಮಗ ತಿಲಕ್‌ರಾಜ್‌ರವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್‌ನಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಗಂಭೀರ ಗಾಯಗೊಂಡಿದ್ದ ಸೋಮಪ್ಪ ಹಾಗೂ ಗಿರಿಜಾ ಅವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಗಿರಿಜಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ..