ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ನೂತನ ಟ್ರಸ್ಟಿಗಳ ಪದಗ್ರಹಣ

|

ನೆಲ್ಯಾಡಿ09/06/26: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯ ವಾರ್ಷಿಕ ಮಹಾಸಭೆಯಲ್ಲಿ 2026-2027ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾದ ನೂತನ ಟ್ರಸ್ಟಿಗಳಾದ ಶ್ರೀ ಜೈಸನ್ ಮ್ಯಾಲಿಲ್, ಶ್ರೀ ಕುರಿಯನ್ ಕಿಯಕ್ಕೆಲ್, ಶ್ರೀ ರಾಜೇಶ್ ತೆಕ್ಕನಾಟ್ಟ್ ಹಾಗೂ ಶ್ರೀ ಸೇಬಾಸ್ಟಿಯನ್ ವಲಿಯಪರಂಭಿಲ್ ಅವರು ಪದಗ್ರಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರು ನೂತನ ಟ್ರಸ್ಟಿಗಳಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಟ್ರಸ್ಟಿಗಳು ನಿಷ್ಕಾಮ ಸೇವಾ ಮನೋಭಾವದಿಂದ ಸಮಾಜಮುಖಿ ಹಾಗೂ ಜನಾನುರಾಗಿ ಕಾರ್ಯಗಳನ್ನು ಕೈಗೊಂಡು, ಪುಣ್ಯ ಕ್ಷೇತ್ರದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ಧರ್ಮ ಕೇಂದ್ರದ ಸದಸ್ಯರು ಉಪಸ್ಥಿತರಿದ್ದು, ನೂತನ ಟ್ರಸ್ಟಿಗಳಿಗೆ ಶುಭಾಶಯಗಳನ್ನು ಕೋರಿದರು.