ಹಾಸನದಲ್ಲಿ ಕಾಡಾನೆ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆ

|

ಹಾಸನದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ತೀವ್ರಗೊಳಿಸಿದ್ದಾರೆ.ಇಬ್ಬರನ್ನು ಬಲಿ ಪಡೆದಿರುವಂತಹ ಪುಂಡಾನಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಾಹಸ ಪಡುತ್ತಿದೆ.ಬೇಲೂರು ತಾಲೂಕಿನ ಕಾನಹಳ್ಳಿ ದಟ್ಟ ಅರಣ್ಯದಲ್ಲಿ ಇಂದು ಕೂಡ ಕಾರ್ಯಾಚರಣೆ ನಡೆಯಲಿದೆ.ನಿನ್ನೆ ಆನೆಗಳು ಕಾಡಿನ ಒಳಗೆ ನಿಂತಿದ್ದರಿಂದ ಅರವಳಿಕೆ ಮದ್ದು ನೀಡೋಕೆ ಸಾಧ್ಯವಾಗಿಲ್ಲ.ಆದ್ದರಿಂದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಇವತ್ತಿಗೆ ಮುಂದೂಡಲಾಗಿತ್ತು.ಹೀಗಾಗಿ ಇಂದು ಬೆಳಗ್ಗೆಯಿಂದಲೇ ಮತ್ತೆ ಕಾರ್ಯಾಚರಣೆ ಮುಂದುವರಿಸೋಕೆ ಅರಣ್ಯ ಇಲಾಖೆ ಸಿದ್ಧತೆಯಲ್ಲಿದೆ