ಈ ಸ್ವಾತಂತ್ರ್ಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಿ...

ಈ ಸ್ವಾತಂತ್ರ್ಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಿ

ಹತ್ತಾರು ಧರ್ಮ ನೂರಾರು ದೇವರುಗಳನ್ನು ನೂಕಾಚೆ ದೂರ ಶಾಂತಿ ಪ್ರೀತಿಯ ಹುಡಿ ತುಂಬಿಕೊಳ್ಳಲು ಮಾನವಿಯತೆಯೊಂದಿದ್ದರೆ ಸಾಕು...

*ಸಂತ ನಾರಾಯಣ ಗುರು*

ಭಾರತ ದೇಶ ಸನಾತನ ಪುರಾತನ ಭವ್ಯ ಪರಂಪರೆಯನ್ನು ಹೊಂದಿರುವ ದೇಶ.ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ಬೀಸುವ ತಂಗಾಳಿ ಕೂಡ ಐಕ್ಯತೆಯನ್ನು ಪ್ರತಿಬಿಂಭಿಸುತ್ತಿದೆ. ಇನ್ನು ಅಲ್ಲಮಾ ಇಕ್ಬಾಲರ ಶಾಯರಿಯಲ್ಲಿ ಹೇಳುವುದಾದರೆ *India is a beautiful garden of flowers.* ಭಾರತ ಒಂದು ಸುಂದರವಾದ ತೋಟ. ಆ ತೋಟದಲ್ಲಿ ನಳನಳಿಸುವ ಕುಸುಮಗಳಾಗಿದ್ದೇವೆ ನಾವು ಎನ್ನುವಂತಹ ಮಾತು ಸೌಹಾರ್ಧತೆಯ ಸಂಕೇತವಾಗಿದೆ.ಅಂತಹ ಭಾರತದ ಸೌಹಾರ್ದತೆಯ ಪರಂಪರೆಗೆ ಕೊಡಲಿ ಏಟು ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎನ್ನುವಂತದ್ದು ಖೇದಕರ ಸಂಗತಿ.ಈ ಭಾರತದ ಸ್ವಾತಂತ್ರ್ಯಕ್ಕೆ ಬೇಕಾಗಿ ಹಗಳು ಇರುಳು ಕಷ್ಟಪಟ್ಟಂತಹ ಹಲವಾರು ನಾಯಕರು ನಮ್ಮಲ್ಲಿದ್ದಾರೆ.ಆದರೆ ನಾವು ಕೆಲವೊಂದು ನಾಯಕರನ್ನು ಮಾತ್ರ ಸ್ಮರಿಸುವ ಮೂಲಕ ನಮ್ಮ ಸ್ವಾತಂತ್ರ್ಯ ವನ್ನು ಸೀಮಿತಗೊಳಿಸುತ್ತಿದ್ದೇವೆ. ಶೃಂಗೇರಿ ಮಟವನ್ನು ಮರಾಠರು ದಾಳಿ ಮಾಡಿದಂತಹ ಸಂದರ್ಭದಲ್ಲಿ ಆ ದೇವಸ್ಥಾನಕ್ಕೆ ಕಾವಲುಭಟರಾಗಿ ನಿಂತಂತಹ ಟಿಪ್ಪು ಸುಲ್ತಾನ್ ರವರಿಂದ ನಾವು ದೇಶ ಪ್ರೇಮ ಕಲಿಯಬೇಕಿದೆ. ನಿನ್ನ ಸೊಂಟಕ್ಕೆ ಒಂದು ತುಂಡು ಬಟ್ಟೆಯನ್ನಾದರು ಕಟ್ಟಿ ತಾರಾ ಸ್ವರದಿಂದ ಹೇಳು ನಾನೋಬ್ಬ ಭಾರತೀಯ ಅಂತ ಕಲಿಸಿಕೊಟ್ಟ ಸ್ವಾಮಿ ವಿವೇಕಾನಂದರಿಂದ ನಾವು ದೇಶ ಪ್ರೇಮ ಕಲಿಯಬೇಕಿದೆ. ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಕಲ್ಪಿಸಿದ ಸುಭಾಷ್ ಚಂದ್ರ ಬೋಸ್ ರು ವೀರತೆಯ ಪ್ರತೀಕ. ತನ್ನ ಎದೆ ಹಾಳು ನಿಮಗೆ ಅಮೃತವಾಗಬೇಕಾದರೆ ಈ ದೇಶಕ್ಕಾಗಿ ಹೋರಾಡಿಯೇ ಮಡಿಯಯಬೇಕೆಂದು ತನ್ನ ಎರಡು ಮಕ್ಕಳೊಂದಿಗೆ ಆಜ್ಙಾಪಿಸಿದ ಆಬಿದಾ ಬೇಗಮ್ ರಿಂದ ನಾವು ದೇಶ ಪ್ರೇಮ ಕಲಿಯಬೇಕಿದೆ. 

ಇಂತಹ ಹಲವಾರು ನಾಯಕರು ಈ ದೇಶದ ಅಖಂಡತೆಗೆ ಸೌಹಾರ್ದತೆಯ ಪರಂಪರೆಗೆ ಪ್ರತೀಕವಾಗಿ ಪ್ರಾಣತೆತ್ತಿದ್ದಾರೆ ಅಂತಹ ಭಾರತ ಇವತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವಾಗ ನಾವು ಚರಿತ್ರೆ ಪುಟಗಳಿಂದ ನೈಜತೆಯ ಹಾದಿಯನ್ನು ತಿಳಿಸಿಕೊಡುವ ಅಗತ್ಯತೆ ಇದೆ.

 

*✍️ ಅಬೂಬಕ್ಕರ್ ಕೌಸರಿ ಕುದ್ರಡ್ಕ*(ಪ್ರಾಧ್ಯಾಪಕರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಆತೂರು)