ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಚರಣೆ ಕಾರ್ಯಕರ್ತೆಯರ ನಿರ್ದಿಷ್ಟಾವಧಿ ಹೋರಾಟ ಮೂರನೇ ದಿನಕ್ಕೆ ಮುಂದುವರಿದಿದೆ.
ಕನಿಷ್ಠ ಮಾಸಿಕ ಗೌರವಧನ 15,000 ರೂಪಾಯಿ ಹೆಚ್ಚಿಸುವುದು ನಿವೃತ್ತಿ ಪರಿಹಾರವಾಗಿ 5 ಲಕ್ಷ ರೂಪಾಯಿ ನೀಡೋದು ಸೇರಿದಂತೆ 8 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಚಳಿಯನ್ನು ಲೆಕ್ಕಿಸದೆ ಫ್ರೀಡಂ ಪಾರ್ಕ್ ಹಾಗೂ ಶೇಷಾದ್ರಿ ರಸ್ತೆಯಲ್ಲಿ ಟಾರ್ಪಲ್ ಹಾಕಿಕೊಂಡು ರಾತ್ರಿ ಕಳೆದಿದ್ದಾರೆ.
ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
