ಇಂದು ಮೆಡಿಕಲ್ ಸ್ಟೋರ್ ಬಂದ ಹಿನ್ನೆಲೆ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್ ಕ್ಲೋಸ್.ದಕ್ಷಿಣ ಕನ್ನಡದಲ್ಲಿ ವ್ಯಾಪಕ ಬೆಂಬಲ

|

ಮಂಗಳೂರು : ಆನ್‌ಲೈನ್‌ ಔಷಧ ಮಾರಾಟ ಮತ್ತು ಇ-ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ವಿರೋಧಿಸಿ ಇಂದು (ಮೇ 20) ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಒಂದು ದಿನದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವ ಔಷಧಿಗಳ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗಿದೆ. ತುರ್ತು ಔಷದಿಗಳಿಗೆ ಕೆಲವು ಮೆಡಿಕಲ್ ಗಳು ತೆರೆದಿದೆ 

ಡೆಲಿವರಿ ಆ್ಯಪ್ ಆಧಾರಿತ ಔಷಧಿ ಮಾರಾಟದಿಂದ ಅಕ್ರಮ ಇ-ಫಾರ್ಮಸಿಗಳು, ನಿಯಂತ್ರಣವಿಲ್ಲದ ಆನ್‌ಲೈನ್ ಔಷಧ ಮಾರಾಟ, ಸೂಕ್ತ ವೈದ್ಯರ ಚೀಟಿ ಇಲ್ಲದೇ ನಕಲಿ ಪ್ರಿಸ್ಕ್ರಿಪ್ಷನ್‍ಗಳ ಬಳಕೆ, ಅಂಟಿಬಯೋಟಿಕ್ ಮತ್ತು ಚಟ ಉಂಟುಮಾಡುವ ಔಷಧಿಗಳ ದುರುಪಯೋಗ, ರೋಗಿ ಮತ್ತು ಫಾರ್ಮಸಿ ನಡುವೆ ನೇರ ಸಂಪರ್ಕದ ಕೊರತೆ ಸೃಷ್ಟಿಸಲಿದೆ ಎಂದು ಆರೋಪಿಸಲಾಗಿದೆ