ಇದು ಭಾರತದಲ್ಲಿ ನಡೆಯುತ್ತಿರುವ ಮೊದಲ ಸ್ವತಂತ್ರ ಕಾಮನ್ವೆಲ್ತ್ ಮಹಿಳಾ ಜನಪ್ರತಿನಿಧಿಗಳ ಸಮ್ಮೇಳನವಾಗಿದ್ದು ಇಂದು ಇದಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 150ಕ್ಕೂ ಹೆಚ್ಚು ಮಹಿಳಾ ಸಂಸದರು ಮತ್ತು ಶಾಸಕರು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಾರೆ; ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಮಹಿಳೆಯರ ನಾಯಕತ್ವವನ್ನು ಬಲಪಡಿಸುವುದು, ಡಿಜಿಟಲ್ ಸಬಲೀಕರಣ,
ಸುರಕ್ಷಿತ ಸೈಬರ್ ವಾತಾವರಣ ನಿರ್ಮಾಣ, ಮತ್ತು ಹೊಸ ಮಹಿಳಾ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಯ ಕುರಿತು ವಿಶೇಷ ಗೋಷ್ಠಿಯನ್ನು ನಡೆಯಿಸಲಾಗುತ್ತೆ.ಈ ಐತಿಹಾಸಿಕ ಸಮ್ಮೇಳನವು ಬೆಂಗಳೂರಿನ ವಿಧಾನಸೌಧದಲ್ಲಿ ನವೆಂಬರ್ 17 ಮತ್ತು 18 ರಂದು ಎರಡು ದಿನಗಳ ಕಾಲ ನಡೆಯುತ್ತಿದೆ
