ಟೆಲಿಕಾಂ ಇಂಜಿನಿಯರ್ ಪಿ ಮಹಾದೇವ ರಿಗೆ ಟಾಟಾ ಟೆಲಿಸರ್ವಿಸ್ ಸಂಸ್ಥೆಯ "ಉತ್ತಮ ಸಾಧಕ ಪ್ರಶಸ್ತಿ " ನೀಡಿ ಸನ್ಮಾನ

|

ಶಿರಿಸಿ 09/06/26 :ಭಾರತೀಯ ಟೆಲಿಕಾಂ ಸಂಸ್ಥೆ ಟಾಟಾ ಟೆಲಿಸರ್ವಿಸ್ ಗೆ ಸೇರಿದ ಭೂಗತ ಒಫ್ಟಿಕಲ್ ಫೈಬರ್ ಕೇಬಲ್  ಕುಮಟಾ ಶಿರಿಸಿ ಮಾರ್ಗವಾಗಿ ಸೊರಬ ವರೆಗಿನ ಸುಮಾರು 130 ಕಿ. ಮೀ.ಹೆಚ್ಚಿನ ಭೂಗತ ಕೇಬಲ್ ನ   ನಿರ್ವಹಣೆ ಯನ್ನು ಪೇಸ್ ಡಿಜಿಟಲ್ ಸಂಸ್ಥೆಗೆ ಗುತ್ತಿಗೆ ನೀಡಿರುತ್ತದೆ. ಈ ಸಂಸ್ಥೆಯು ಶಿರಿಸಿ ಭಾಗದ OFC  ನಿರ್ವಹಣೆಗೆ ಇಂಜಿನಿಯರ್ ಆಗಿ ಪಿ. ಮಹಾದೇವ ಅವರನ್ನು ನಿಯೋಗಿಸಲಾಗಿತ್ತು.ಸುಮಾರು 20 ವರುಷಗಳಿಂದ  ಪಿ ಮಹಾದೇವ ಅವರು ಈ ಮಾರ್ಗದ OFC ನಿರ್ವಹಣೆಯನ್ನು  ದುರಸ್ಥಿ ಕಾರ್ಯ ಬಾರದ ಹಾಗೆ ಟಾಟಾ ಸಂಸ್ಥೆ ಯ ನೆಟ್ವರ್ಕ್ ಸ್ಥಗಿತ ಗೊಳ್ಳದ ರೀತಿಯಲ್ಲಿ ಮುತುವರ್ಜಿ ವಹಿಸಿಕೊಂಡಿರುತ್ತಾರೆ. ತಮ್ಮ ನಿಷ್ಠೆ ಪ್ರಾಮಾಣಿಕ ಸೇವೆಯ ಮೂಲಕ ಗುರುತಿಸಿ ಟಾಟಾ ಟೆಲಿಸರ್ವಿಸ್ ಸಂಸ್ಥೆಯು ರಾಷ್ಟ್ರ ಮಟ್ಟದ ಘನತೆಯ "ಉತ್ತಮ ಸಾದಕ ಪ್ರಶಸ್ತಿ " ಯನ್ನು ಕೇರಳದ ವಯನಾಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ ಮಹಾದೇವ ಅವರಿಗೆ ನೀಡಿ ಗೌರವಿಸಿದರು.
   ಗೌರವ ವನ್ನು ಸ್ವೀಕರಿಸಿದ ಪಿ. ಮಹಾದೇವ ಅವರು ಈಸಂಧರ್ಭ ಮಾತನಾಡಿ.... 'ನನಗೆ ಕೊಟ್ಟ ಜವಾಬ್ದಾರಿಯನ್ನು  ನಾನು ಉತ್ತಮವಾಗಿ ನಿಭಯಾಸಿ ಕೊಂಡು ಬಂದಿದ್ದೇನೆ. ಹಾಗೇನೇ ನನ್ನ ಜೊತೆಗೆ ನನ್ನ   FRT ಟೀಮ್ ಉದ್ಯೋಗಿಗಳು..ಸಹೋದ್ಯೋಗಿಗಳ ಮತ್ತು ಟೀಮ್ ಲೀಡರ್ ಶ್ರೀಯುತ   ಸಚ್ಚಿದಾನಂದ ಸರ್ ಅವರ ಹಾಗೇನೇ ಕರ್ನಾಟಕದ ಹೆಡ್ ಮ್ಯಾನೇಜರ್ ಆಗಿರುವ ಶ್ರೀಯುತ ಮಹೇಶ್ ಸರ್ ಅವರ ಮಾರ್ಗದರ್ಶನ ಮತ್ತು ಪ್ರೊತ್ಸಾಹ ನನ್ನ ಜವಾಬ್ದಾರಿಯನ್ನು 
ಉತ್ತಮವಾಗಿ ನಿಭಾಯಿಸಲು ಸಹಕಾರಿ ಯಾಗಿತ್ತು . ಶಿರಿಸಿ ಘಾಟ್ ರಸ್ತೆ ಅಗಲಿಕಾರಣದ ವೇಳೆ OFC ಕೇಬಲ್ ನಿರ್ವಹಣೆ ತುಂಬಾನೇ ಕಷ್ಟಕರವಾದ ಕೆಲಸ ಆಗಿತ್ತು .ಆದರೂ ನನ್ನ ಕೆಲಸದಲ್ಲಿ ಯಾವತ್ತು ನಾನು ಸಧಾ ಉಸ್ತಾವಾಕನಾಗಿ ಭಾಗಿ ಯಾಗಿರುತಿದ್ದೆ . ಕೇಬಲ್ ಕಟ್ ಆಗುವ ಸಂಧರ್ಭವನ್ನು ತಪ್ಪಿಸುವಲ್ಲಿ ಯಶಸ್ವಿಆಗಿದ್ದೇನೆ. ಇನ್ನು ಮುಂದೆ ಕೂಡ ನನ್ನ ಸೇವೆಯನ್ನು ಮುಂದುವರಿಸಿಕೊಂಡು ಹೋಗುವೆನು 'ಎಂದು ನುಡಿದರು.
   ಪಿ ಮಹದೇವ ಅವರ ಈ ಸಾಧನೆ ನಮ್ಮ ಕರ್ನಾಟಕ ದಲ್ಲಿ ಟಾಟಾ ಟೆಲಿ ಸರ್ವಿಸ್ ನಲ್ಲಿ ಕೆಲಸ ಮಾಡುವ  ಎಲ್ಲಾ ಟೆಲಿಕಾಂ O&M ಇಂಜಿನಿಯರ್ ಗಳಿಗೆ ಮಾದರಿ ಆಗಲಿ, ಎಂದು ಕರ್ನಾಟಕ ವ್ಯಾಪ್ತಿ ಮ್ಯಾನೇಜರ್ ಆಗಿರುವ ಶ್ರೀಯುತ ಮಹೇಶ್ ಅವರು ಈ ಸಂಧರ್ಭದಲ್ಲಿ ಪಿ. ಮಹಾದೇವ ಅವರಿಗೆ ಶುಭಾಶಯ ಕೋರಿದರು.ಜೊತೆಗೆ  ಸಹೋದ್ಯೋಗಿ ಗಳಾದ ಎಲ್ಲಾ ಜಿಲ್ಲಾ ವ್ಯಾಪ್ತಿಯ ಇಂಜಿನಿಯರ್ ಗಳು, ಟೀಮ್ ಲೀಡರ್ ಗಳು ಶುಭಾಶಯ ಕೋರಿದರು.