ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮತ್ತು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಗತವರ್ಷದ ಲೆಕ್ಕಪತ್ರಗಳನ್ನು ಉಪನ್ಯಾಸಕರಾದ ಚೇತನ್ ಎಂ ಮಂಡಿಸಿದರು. ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಇವರು ವರದಿಯನ್ನು ವಾಚಿಸಿದರು.
ನೂತನ ಸಾಲಿನ ಅಧ್ಯಕ್ಷರಾಗಿ ಶ್ರೀ ಬಾಲಕೃಷ್ಣ ಗೌಡ ಬೇಂಗದಪಡ್ಪು ಕೊಯಿಲ, ಉಪಾಧ್ಯಕ್ಷರಾಗಿ ಶ್ರೀಮತಿ ವನಜಾ , ಕಾರ್ಯದರ್ಶಿಗಳಾಗಿ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎ, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಮಹಾಬಲ ಶೆಟ್ಟಿ ನೇಲಡ್ಕ, ಕೋಶಾಧಿಕಾರಿಗಳಾಗಿ ಶ್ರೀ ಚೇತನ್ ಎಂ ಇವರು ಆಯ್ಕೆಗೊಂಡರು.
ನಿರ್ಗಮಿತ ಅಧ್ಯಕ್ಷರಾದ ಶ್ರೀ ಉಮೇಶ್ ಕೆ ಎನ್ ಪೆರುವಾಜೆ, ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ರಕ್ಷಕ ಶಿಕ್ಷಕ ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ವೆಂಕಟೇಶ ದಾಮ್ಲೆ ಸಂಧರ್ಭೋಚಿತವಾಗಿ ಮಾತನಾಡಿದರು. ನಿರ್ಗಮಿತ ಕಾರ್ಯದರ್ಶಿಗಳಾದ ಶಿಕ್ಷಕರಾದ ಶ್ರೀ ದಿನೇಶ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪಾ ಎ ಧನ್ಯವಾದ ಸಮರ್ಪಿಸಿದರು.





