ನೆಲ್ಯಾಡಿ 7/7/26 : ಕಥೋಲಿಕ್ ಸಭಾ, ಐ. ಸಿ. ವೈ. ಎಂ, ಸ್ತ್ರೀ ಸಂಘಟನೆ ಹಾಗೂ ಪರಿಸರ ಆಯೋಗದ ಸಹಕಾರದೊಂದಿಗೆ ನೆಲ್ಯಾಡಿ ಬಾಲ ಯೇಸು ದೇವಾಲಯದಲ್ಲಿ ಪರಿಸರ ದಿನ ಆಚರಣೆ ಜುಲೈ 5 ಆದಿತ್ಯವಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ದೇವಾಲಯದ ಧರ್ಮಗುರುಗಳಾದ ವಂದನೀಯ ರೆ ಫಾ ಗ್ರೇಶನ್ ಅಲ್ವಾರೀಸ್ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ದೇವಾಲಯದ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀ ಜೋನ್ ಮೊಂತೇರೊ, ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಡಿಸೋಜಾ, ಆಯೋಗದ ಸಂಚಾಲಕರಾದ ಶ್ರೀ ಪಾವ್ಲ್ ಡಿಸೋಜಾ, ಸುಪಿರಿಯರ್ ಸಿ. ಜೆಸ್ಸಿ ಜೋಸೆಫ್, ಕಥೋಲಿಕ್ ಸಭಾ ಅಧ್ಯಕ್ಷೆ ಶ್ರೀಮತಿ ನಿಶ್ಮಿತಾ ಡಿಸೋಜಾ, ಐ. ಸಿ. ವೈ. ಎಂ ಅಧ್ಯಕ್ಷ ಅಕ್ವಿಲ್ ಜೋನ್ಸನ್ ಡಿಸೋಜಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಶ್ರೀಮತಿ ಶಾಂತಿ ಡಿಸೋಜಾ, ಪರಿಸರ ಆಯೋಗದ ಸಂಚಾಲಕಿ ಶ್ರೀಮತಿ ಐಡ ಡಿಸೋಜಾ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ತೋಟದಲ್ಲಿ ಅಡಿಕೆ ಸಸಿ ನೆಡಲಾಯಿತು.ಶ್ರೀಮತಿ ಸ್ಮಿತಾ ರೋಡ್ರಿಗಸ್ ಸ್ವಾಗತಿಸಿದರು, ಅಕ್ವಿಲ್ ಡಿಸೋಜಾ ಧನ್ಯವಾದ ಸಮರ್ಪಿಸಿದರು.ಶ್ರೀಮತಿ ಸುಶ್ಮಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

