ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯ ಕೊಕ್ಕಡ ಪಾಲಕರ ಹಬ್ಬ ಆಚರಣೆ

|

ಕೌಕ್ರಾಡಿ : ಜೂನ್ 24 ರಂದು ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯ ಕೊಕ್ಕಡ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಪಾಲಕರ ಹಬ್ಬ ಆಚರಿಸಲಾಯಿತು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮಪೂಜ್ಯ ಜೇಮ್ಸ್ ಪಟ್ಟೆರಿಲ್ ಇವರನ್ನು ಧರ್ಮಗುರುಗಳು ಹಾಗೂ ಪಾಲನ ಸಮಿತಿಯ ಉಪಾಧ್ಯಕ್ಷೆ ಹಾಗೂ ಕಾರ್ಯದರ್ಶಿಯವರು ಹೂಗುಚ್ಚ ನೀಡಿ ಸ್ವಾಗತಿಸಿದರು. ನಂತರ ಮಾಯಿದೆ ದೇವಸ್ ದೇವಾಲಯ ಪುತ್ತೂರು ಇಲ್ಲಿನ ಧರ್ಮಗುರುಗಳಾದ ಅತೀವಂದನೀಯ ಡಾ| ಜೆ.ಬಿ. ಸಲ್ಡಾನ ರವರ ನೇತೃತ್ವದಲ್ಲಿ ಸಂಜೆ 6 ಗಂಟೆಗೆ ದಿವ್ಯ ಬಲಿಪೂಜೆಯನ್ನು ನೇರವೆರಿಸಲಾಯಿತು..  ಕೊಕ್ಕಡ ದೇವಾಲಯದ ವಿಚಾರಣ ಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಡಿಸಿಲ್ವಾ, ಸೇವಾದರ್ಶಿ ವಿಲ್ಫ್ರೆಡ್ ರೊಡ್ರಿಗಸ್,  ಪುತ್ತೂರು ವಲಯದ  ಧರ್ಮಗುರುಗಳು , ನೆಲ್ಯಾಡಿ ಹಾಗೂ ಕೊಕ್ಕಡ ದೇವಾಲಯದ ಗುರುಗಳು 
ಹಾಗೂ ಧರ್ಮಭಗಿನಿಯರು ಈ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸನ್ಮಾನಿಸಲಾಯಿತು. ಕಳೆದ ಅವಧಿಯಲ್ಲಿ ಚರ್ಚ್ ಪಾಲನ ಸಮಿತಿಯಲ್ಲಿ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಗುರಿಕಾರರಾಗಿ ಸೇವೆ ಸಲ್ಲಿಸಿದರನ್ನು ಸನ್ಮಾನಿಸಲಾಯಿತು. ನಂತರ ಮುಖ್ಯ ಅತಿಥಿಗಳಾದ ಪರಮ ಪೂಜ್ಯ ಜೇಮ್ಸ್ ಪಟ್ಟೇರಿಲ್ ಧರ್ಮದ್ಯಕ್ಷರು ಬೆಳ್ತಂಗಡಿ ಧರ್ಮಪ್ರಾಂತ್ಯ  ಹಾಗೂ ಅತೀ ವಂದನೀಯ ಡಾ|ಜೆ.ಬಿ.  ಸಲ್ಡಾನ ಇವರನ್ನು ಕೂಡ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ಸಂತ ಸ್ನಾನಿಕ ಯೋವನ್ನರ ಜೀವನ, ತ್ಯಾಗ ಮತ್ತು ದೇವರ ಮೇಲಿನ ಅವರ ಅಚಲ ನಂಬಿಕೆಯ ಬಗ್ಗೆ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ದೇವಾಲಯದ ವಿಚಾರಣ ಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಡಿಸಿಲ್ವಾ ಇವರು  ಪ್ರಾಸ್ತವಿಕ ಭಾಷಣ ಮಾಡಿದರು. ನೆರದ ಸರ್ವರನ್ನು ಪಾಲನ ಸಮಿಯ ಉಪಾಧ್ಯಕ್ಷೆ ಶ್ರೀಮತಿ ಶಾಂತಿ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಲವೀನಾ ಡಿಸೋಜ ಧನ್ಯವಾದ ಸಮರ್ಪಿಸಿದರು. ಶ್ರೀ ವಿನ್ಸೆಂಟ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಪಾಲನ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ