ನೆಲ್ಯಾಡಿ ಬಾಲಯೇಸು ದೇವಾಲಯದ ವಾರ್ಷಿಕ ಹಬ್ಬ ಆಚರಣೆ

|

ನೆಲ್ಯಾಡಿ : ನೆಲ್ಯಾಡಿ ಬಾಲಯೇಸು ದೇವಾಲಯದ ವಾರ್ಷಿಕ ಹಬ್ಬ ಜ14 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಹೊರೆಕಾಣಿಕೆಯ ಮೆರವಣಿಗೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.ಸಂಭ್ರಮಿಕ ದಿವ್ಯಬಲಿಪೂಜೆಯನ್ನು ರೆ. ಫಾ ನೋರ್ಮನ್ ಮಥಾಯಸ್ ಸಹಾಯಕ ಧರ್ಮಗುರುಗಳು ಬಿಜೈ ಚರ್ಚ್ ಮಂಗಳೂರು ನೆರವೇರಿಸಿದರು.ಮಾಯಿ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ವಿವಿಧ ದೇವಾಲಯದ ಧರ್ಮಗುರುಗಳು ಬಲಿ ಪೂಜೆಯಲ್ಲಿ ಉಪಸ್ಥಿತರಿದ್ದರು.

 ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರುಗಳಾದ ಗ್ರೇಶನ್ ಅಲ್ವಾರೀಸ್ ಹಬ್ಬದ ಯಶಸ್ವಿಗಾಗಿ ದಾನ ನೀಡಿದವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ 6 ವರ್ಷಗಳ ಕಾಲ ದೇವಾಲಯದ ಪಾಲನ ಸಮಿತಿ ಉಪಾದ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ತೋಮಸ್ ಡಿಸೋಜಾ ರವರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.ಭಕ್ತಾದಿಗಳು ತಂದ ಹೊರೆಕಾಣಿಕೆಯ ಎಲಾಂ ಪ್ರಕ್ರಿಯೆ ಹಾಗೂ ದೇವಾಲಯದ ಭಕ್ತಾದಿಗಳು ತಯಾರಿಸಿದ ಭೋಜನದೊಂದಿಗೆ ಹಬ್ಬ ಸಂಪನ್ನಗೊಂಡಿತು.