ನೆಲ್ಯಾಡಿಯಲ್ಲಿ ಉತ್ತಮ ಮಳೆ ವಾಹನ ಸಂಚಾರ ಅಸ್ತವ್ಯಸ್ತ

|

ನೆಲ್ಯಾಡಿ : ಏಪ್ರಿಲ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಇಂದು ಸಂಜೆ 4 ಗಂಟೆಯಿಂದ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ, ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ಜಲಾವೃತಗೊಂಡಿದೆ.ಹೆದ್ದಾರಿ ದುರಸ್ತಿ ನಡೆಯುತ್ತಿದ್ದು, ಹೆದ್ದಾರಿ ಮೇಲಿನ ನೀರು ಪಕ್ಕಕ್ಕೆ ಹರಿಯಲು ಸಾಧ್ಯವಾಗದೆ ವಾಹನ ಸವಾರರು ಪರದಾಡುವ ಸ್ಥಿತಿನಿರ್ಮಾಣವಾಯಿತು,ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ದಾಟಲು ಹೆಣಗಾಡುವ ಪರಿಸ್ಥಿತಿ ಹೆದ್ದಾರಿಯಲ್ಲಿ ಕಂಡುಬಂದಿದೆ. ಮಳೆ ನಿಂತು ಗಂಟೆಗಳು ಕಳೆದರೂ ರಸ್ತೆ ಸಂಚಾರ ಕಷ್ಟಸಾಧ್ಯದ ಪರಿಸ್ಥಿತಿಯಲ್ಲಿ ವಾಹನ ಸವಾರರ ಗೋಳು ಕೇಳುವವರಿಲ್ಲದೆ ಹೈರಾಣಾಗಿದ್ದಾರೆ