ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

|

 ರಾಮಕುಂಜ 6/6/2026:ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಕಾಲೇಜಿನ ಪರಿಸರದಲ್ಲಿ ವಿವಿಧ ಗಿಡಗಳನ್ನು ಯೋಜನಾಧಿಕಾರಿಗಳಾದ ಶ್ರೀ ಕೀರ್ತನ್ ಇವರ ನೇತೃತ್ವದಲ್ಲಿ ನೆಟ್ಟರು.

 ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕನ್ನಡ ಉಪನ್ಯಾಸಕರಾದ ಶ್ರೀ ತಿಲಕಾಕ್ಷ ಕೆ ಇವರು "ನದಿ, ವೃಕ್ಷ, ಗೋವು ಇವೆಲ್ಲವೂ ಪರರ ಹಿತಕ್ಕಾಗಿ ಜೀವಿಸುವಂತಹ ಜೀವಗಳು. ನಾವೆಲ್ಲರೂ ಕೂಡ ಇಂತಹ ಜೀವಿಗಳನ್ನು ಆದರ್ಶವಾಗಿಟ್ಟುಕೊಂಡು, ಅವುಗಳ ಸಂರಕ್ಷಣೆಯನ್ನು ಮಾಡಬೇಕು. ಪರಿಸರ ಹಚ್ಚ ಹಸಿರಾಗಿದ್ದರೆ ಅದರ ನೇರ ಉಪಯೋಗ ಮನುಷ್ಯನಿಗೆ ಖಂಡಿತವಾಗಿಯೂ ಇದೆ. ಹಾಗಾಗಿ ಈ ದಿನದಂದು ನಾವೆಲ್ಲರೂ ಪರಿಸರ ಸಂರಕ್ಷಣೆಯ ಸಂಕಲ್ಪವನ್ನು ಮಾಡಬೇಕು " ಎಂಬ ಸಂದೇಶವನ್ನು ನೀಡಿದರು. 

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.