ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರಿಗೆ ಬಿಳ್ಕೊಡುಗೆ ಸಮಾರಂಭ

|

ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರಿಗೆ ಬಿಳ್ಕೊಡುಗೆ ಸಮಾರಂಭವು ನೆರವೇರಿತು. 

ಸುಧೀರ್ಘ ಅವಧಿಗೆ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಅಕ್ಟೋಬರ್ 31 2026ನೇ ತಾರೀಕಿನಂದು  ಸೇವೆಯಿಂದ ನಿವೃತ್ತಿ ಹೊಂದಿದರು. ಈ ಪ್ರಯುಕ್ತ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸಕರು ತಮ್ಮ ತಮ್ಮ ಮನದಾಳದ ಅನಿಸಿಕೆಯನ್ನು ಪ್ರಸ್ತುತಪಡಿಸಿದರು.  ಕಾರ್ಯಕ್ರಮದ ಕೇಂದ್ರ ಬಿಂದುವಾದ ಪ್ರಾಚಾರ್ಯರು ಮಾತನಾಡಿ, ತಮ್ಮ ಧೀರ್ಘ ಸೇವಾ ಅನುಭವ, ವಿಶೇಷ ಸಂದರ್ಭಗಳ ಮೆಲುಕು ಹಾಕುತ್ತಾ ಸಹೋದ್ಯೋಗಿಗಳಿಗೆ ಶುಭ ಹಾರೈಸಿದರು. 

ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರ ವತಿಯಿಂದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ  ಗೌರವಿಸಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿಯೋಜಿತ ಪ್ರಭಾರ ಪ್ರಾಂಶುಪಾಲರಾದ ಶ್ರೀ ನವೀನ ಕೊರೆಯ, ನಿವೃತ್ತ  ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಡಿ ವಸಂತಕುಮಾರ್ ಉಪಸ್ಥಿತರಿದ್ದರು.

ಉಪನ್ಯಾಸಕ ಚೇತನ್ ಎಂ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಮಾ ಗೀತ ಗಾಯನ ಮಾಡಿದರು. ಉಪನ್ಯಾಸಕರಾದ ಶ್ರೀ ತಿಲಕಾಕ್ಷ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶ್ರೀಮತಿ ಶ್ರೀನಿಧಿ ಭಟ್ ಧನ್ಯವಾದ ಸಮರ್ಪಿಸಿದರು.