ನೆಲ್ಯಾಡಿ ಬಾಲ ಯೇಸು ದೇವಾಲಯದಲ್ಲಿ ಕ್ರೈಸ್ತ ಶಿಕ್ಷಣ ದಿನ ಆಚರಣೆ

|

ನೆಲ್ಯಾಡಿ :ನೆಲ್ಯಾಡಿ ಬಾಲ ಯೇಸು ದೇವಾಲಯದಲ್ಲಿ ಕ್ರೈಸ್ತ ಶಿಕ್ಷಣ ದಿನ ಆಚರಣೆ ಮಾರ್ಚ್ 1 ರಂದು ಭಾನುವಾರ ನಡೆಯಿತು.ಬಲಿ ಪೂಜೆಯನ್ನು ಚರ್ಚ್ ನ ಧರ್ಮಗುರುಗಳಾದ ರೆ ಫಾ ಗ್ರೇಶನ್ ಅಲ್ವಾರೀಸ್ ನೆರವೇರಿಸಿದರು.ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಚರ್ಚ್ ನ ಧರ್ಮಗುರುಗಳಾದ ರೆ ಫಾ ಗ್ರೇಶನ್ ಅಲ್ವಾರೀಸ್, ಸಿ ಜೆಸ್ಸಿ ಜೋಸೆಫ್, ಸಿ ಸೆಲಿನ್ ದೇವಾಲಯದ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀ ಜೋನ್ ಮೊಂತೇರೊ, ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಡಿಸೋಜಾ,ಸರ್ವ ಆಯೋಗದ ಸಂಚಾಲಕರಾದ ಶ್ರೀ ಪಾವ್ಲ್ ಡಿಸೋಜಾ, ಕ್ರೈಸ್ತ ಶಿಕ್ಷಣ ಸಂಯೋಜಕಿ ಶ್ರೀಮತಿ ವಿಲ್ಮಾ ಡಿಸೋಜಾ ಹಾಗೂ ಕ್ರೈಸ್ತ ಶಿಕ್ಷಣ ಬೋದಿಸುವ ಎಲ್ಲಾರೂ ಉಪಸ್ಥಿತರಿದ್ದರು.

ಕ್ರೈಸ್ತ ಶಿಕ್ಷಣ ತರಗತಿಯಲ್ಲಿ ಉತ್ತಮ ಅಂಕ ಹಾಗೂ ಹಾಜರಾತಿ ಯಲ್ಲಿ ಉತ್ತಮ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಕ್ರೈಸ್ತ ಶಿಕ್ಷಣ ಸೇವೆ ಸಲ್ಲಿಸುವ ಎಲ್ಲಾ ಶಿಕ್ಷಕರಿಗೆ ಧರ್ಮಗುರುಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕ್ರೈಸ್ತ ಶಿಕ್ಷಣ ಬೋದಿಸುವ ಶಿಕ್ಷಕಿ ಶ್ರೀಮತಿ ನ್ಯಾನ್ಸಿ ಡಿ ಸೋಜಾ ಸ್ವಾಗತಿಸಿದರು, ಸಂಯೋಜಕಿ ಶ್ರೀಮತಿ ವಿಲ್ಮಾ ಡಿಸೋಜಾ ವಂದಿಸಿದರು, ಶ್ರೀಮತಿ ಪ್ರೆಸ್ಸಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮೆಲಿಷಾ ಮಸ್ಕರೆನ್ಹಸ್ ನಿರೂಪಿಸಿದರು ಎಲ್ಲರಿಗೂ ಉಪಹಾರ ನೀಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.