ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ನವೀನ ಕೊರೆಯ ಅಧಿಕಾರ ವಹಿಸಿಕೊಂಡರು

|

ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ನವೀನ ಕೊರೆಯ ಅಧಿಕಾರ ವಹಿಸಿಕೊಂಡರು.

ಸುಧೀರ್ಘ ಅವಧಿಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಶ್ರೀ ಚಂದ್ರಶೇಖರ ಕೆ ಇವರ ವಯೋನಿವೃತ್ತಿಯ ಕಾರಣದಿಂದ ತೆರವಾದ ಹುದ್ದೆಗೆ, ಆಡಳಿತ ಮಂಡಳಿಯು ಶ್ರೀ ನವೀನ ಕೊರೆಯ ಇವರನ್ನು  ಪ್ರಭಾರ ಪ್ರಾಂಶುಪಾಲರಾಗಿ ಆಯ್ಕೆ ಮಾಡಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ನಾರಾಯಣ ಭಟ್ ಟಿ, ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಕೆ ಎಸ್, ಸದಸ್ಯರಾದ ಶ್ರೀ ಲಕ್ಷ್ಮಿನಾರಾಯಣ ರಾವ್ ಆತೂರು, ಮುಖ್ಯ ಗುರುಗಳಾದ ಶ್ರೀ ವೆಂಕಟೇಶ ದಾಮ್ಲೆ  ಮತ್ತು ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.