ನೆಲ್ಯಾಡಿ : ಡಿಸೆಂಬರ್ 6 ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟಕ್ಕೆ ಡಿಸೆಂಬರ್ 6 ರಂದುಗಾಂಧಿ ಮೈದಾನದಲ್ಲಿ ಚಾಲನೆ ನೀಡಲಾಯಿತು. ಬೆಳ್ಳಗ್ಗೆ 9.3೦ಕ್ಕೆ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಹಾಗೂ ಕಾವಾಯತುಗಳೊಂದಿಗೆ ಆರಂಭವಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಗಳ ಸ್ಥಾಪಕ ಶ್ರೀ ಅಬ್ರಹಾಂ ವರ್ಗಿಸ್ ರವರು ವಹಿಸಿದ್ದರು. ಸರ್ಕಾರಿ ಪ್ರೌಢ ಶಾಲೆ ಪಡುಬೆಟ್ಟಿನ ದೈಹಿಕ ಶಿಕ್ಷಣದ ಶಿಕ್ಷಕರಾದ ಶ್ರೀ ಕುಶಾಲಪ್ಪ ಜಿ ಯವರು ಧ್ವಜಾರೋಹಣಗೈದು ಕ್ರೀಡಾ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾ ಸಂಸ್ಥೆಯ ಹೆಮ್ಮೆಯ ಪೂರ್ವ ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಫೀಕ್ ಪ್ರಿಯದರ್ಶಿನಿ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ,ಫಾ. ನೋಮಿಸ್ ಕುರಿಯಾಕೋಸ್ ಮತ್ತು ಕೋಶಾಧಿಕಾರಿ ಶ್ರೀ ಕೆ ಸಿ ಪಾಪಚ್ಚನ್ ಸಂಸ್ಥೆಯ ಪಿ ಯುಸಿ ಹಾಗೂ ಪ್ರೌಢಶಾಲಾ ವಿಭಾಗಗಳ ಮುಖ್ಯಸ್ಥರು ಹಾಗೂ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.
