ಗೋಳಿತೊಟ್ಟು : ಬೆಂಗಳೂರು –ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರ ಗೋಳಿತೊಟ್ಟು ಸಣ್ಣಂಪಾಡಿ ಸಮೀಪ ಇಂದು ಮಧ್ಯಾಹ್ನ ಸುಮಾರು 2.00 ಗಂಟೆಗೆ ಬೋಲೆರೋ ವಾಹನವೊಂದು ಡಿವೈಡರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಗೋಳಿತೊಟ್ಟುವಿನಿಂದ ಪುತ್ತೂರಿಗೆ ಹೋಗುತ್ತಿದ್ದ ಬೋಲೆರೋ ವಾಹನ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಅದರಲ್ಲಿದ್ದ ಚಾಲಕ ಸೇರಿ ಆರು ಮಂದಿ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದು ಓರ್ವನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ .ತಕ್ಷಣ ಅಲ್ಲಿಯ ಸ್ಥಳೀಯರು ಮತ್ತು ಇತರ ವಾಹನದವರು ಗಾಯಾಳುಗಳನ್ನು ಮೇಲಕ್ಕೇತ್ತಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದರು.
