ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಕ್ರಿಸ್ತನ ಪುನರುತ್ಥಾನದ ಜಾಗರಣೆ,ಪ್ರಾರ್ಥನೆ

|

 ನೆಲ್ಯಾಡಿ:ಬಾಲಯೇಸು ದೇವಾಲಯದಲ್ಲಿ ಈಸ್ಟರ್ ಜಾಗರಣೆ ಪ್ರಾರ್ಥನೆ ಶನಿವಾರ ನಡೆಯಿತು.ಸಂಜೆ ವಿಶೇಷ ಪ್ರಾರ್ಥನವಿಧಿಯೊಂದಿಗೆ ಬಲಿಪೂಜೆ ಆರಂಭಗೊಂಡಿತು.ಹೊಸ ಅಗ್ನಿಯನ್ನು ಆಶೀರ್ವಚನ ಮಾಡುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ವ್ಯಕ್ತಿಗಳಗುವಂತೆ ಸಂದೇಶ ಸಾರಲಾಯಿತು.ಹೊಸ ಅಗ್ನಿಯ ಆಶೀರ್ವಚನ ನಂತರ ಮೆರವಣಿಗೆ,ಪಾಸ್ಕಾ ಗಾಯನ ನಡೆಸಲಾಯಿತು. ಆತಿಥಿ ಧರ್ಮಗುರುಗಳಾದ ವಂದನಿಯ ಫಾ ವಿನ್ಸೆಂಟ್ ಡಿಸೋಜಾ ಪುನರುತ್ಥಾನದ ಸಂದೇಶದೊಂದಿಗೆ ಪ್ರವಚನ ನೀಡಿದರು.ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ ಗ್ರೇಶನ್ ಅಲ್ವಾರೀಸ್ ಉಪಸ್ಥಿತರಿದ್ದರು.ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಸಿ, ದೀಕ್ಷಾಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು.