ರೆಖ್ಯ: ರಾಷ್ಟ್ರೀಯ ಹೆದ್ದಾರಿ 75ರ ಎಂಜಿರದಲ್ಲಿ ಮೀನು ಸಾಗಾಟ ಟೆಂಪೋ ಮತ್ತು ಕಾರು ಡಿಕ್ಕಿ

|

ರೆಖ್ಯ: ರಾಷ್ಟ್ರೀಯ ಹೆದ್ದಾರಿ 75 ರ ರೆಖ್ಯ ಸಮೀಪ ಎಂಜಿರ ಎಂಬಲ್ಲಿ ಟೆಂಪೊ ಮತ್ತು ಕಾರ್ ನಡುವೆ ಆ.6ರಂದು ಅಪಘಾತ ಸಂಭವಿಸಿದೆ ಉಡುಪಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಮೀನಿನ ಟೆಂಪೊ ಮತ್ತು ಹಾಸನ ಕಡೆಯಿಂದ ಮಂಗಳೂರು ಚಲಿಸುತ್ತಿದ್ದ ಕಾರ್ ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದೆ.ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಯಾವುದೇ ಸೂಚನಾ ಫಲಕವನ್ನು ಹಾಕದೆ ಏಕಮುಖವಾಹನ ಸಂಚಾರಕ್ಕೆ ಅವಕಾಶವನ್ನು ನೀಡಿರುವುದೇ ಈ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ ಈ ಪ್ರದೇಶದಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೆ ಇದೆ.ಈ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಕಾರು ಮತ್ತು ಮೀನಿದ ಟೆಂಪೋ ಜಖಂ ಗೊಂಡಿದೆ.