ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಆಚರಣೆ

|

ರಾಮಕುಂಜ:ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ಮಾತನಾಡುತ್ತಾ "1949ರ ನವಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಇವರ ನಾಯಕತ್ವದಲ್ಲಿ ಸಂವಿಧಾನವು ಮೂಡಿಬಂದಿದೆ. ಈ ಸಂವಿಧಾನದ ಕಾರಣದಿಂದಾಗಿ ನನ್ನ ರಾಷ್ಟ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾವೆಲ್ಲರೂ ಕೂಡ ಸಂವಿಧಾನದ ಅಧ್ಯಯನವನ್ನು ಮಾಡಬೇಕು." ಎಂದು ಹೇಳಿದರು. ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕಿಯರಾದ ಶ್ರೀಮತಿ ಲಾವಣ್ಯ, ಶ್ರೀಮತಿ ಶ್ರೀನಿಧಿ ಮತ್ತು ಕುಮಾರಿ ಸ್ನೇಹ ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಎಂ ಸಹಕರಿಸಿದರು.