ಸಂತ ಜೋನರ ದೇವಾಲಯ, ಕೊಕ್ಕಡಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾಅಧಿಕೃತ ಭೇಟಿ

|

ಕೊಕ್ಕಡ:ಸಂತ ಜೋನರ ದೇವಾಲಯ, ಕೊಕ್ಕಡಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಜ 31 ಮತ್ತು ಫೆ 01 ರಂದು ಅಧಿಕೃತ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ದೇವಾಲಯದ ಧರ್ಮಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಡಿಸಿಲ್ವಾ, ಪಾಲನಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಶಾಂತಿ ಪ್ರಿಯಾ ಡಿಸೋಜ ಹಾಗೂ ಕಾರ್ಯದರ್ಶಿ ಶ್ರೀಮತಿ ಲವೀನಾ ಡಿಸೋಜ ಅವರು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.ನಂತರ ಧರ್ಮಾಧ್ಯಕ್ಷರು ದೇವಾಲಯದಲ್ಲಿ ಹಾಗೂ ಸಮಾಧಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ತಮ್ಮ ಭೇಟಿಯ ಅವಧಿಯಲ್ಲಿ ಅವರು ಕ್ರೈಸ್ತ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಕೆಲವು ಕುಟುಂಬಗಳನ್ನು ಭೇಟಿಯಾಗಿ ಆಶೀರ್ವಾದ ನೀಡಿದರು ಹಾಗೂ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಫೆ01 ರಂದು 36 ಮಕ್ಕಳಿಗೆ ದೃಢೀಕರಣ ಸಂಸ್ಕಾರವನ್ನು ನೀಡಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.