ಸಮಸ್ತ ಪುತ್ತೂರಿನ ನಾಗರಿಕರ ಪರವಾಗಿ 68 ರಾಷ್ಟ್ರಗಳನ್ನು ಸಂಚರಿಸಿದ ನಮ್ಮೂರಿನ ಹೆಮ್ಮೆಯ ಯುವ ಪ್ರತಿಭೆ united wander ಖ್ಯಾತಿಯ ಸಿನಾನ್ ಇವರಿಗೆ

|

ಪುತ್ತೂರು : ಸಮಸ್ತ ಪುತ್ತೂರಿನ ನಾಗರಿಕರ ಪರವಾಗಿ 68 ರಾಷ್ಟ್ರಗಳನ್ನು ಸಂಚರಿಸಿದ ನಮ್ಮೂರಿನ ಹೆಮ್ಮೆಯ ಯುವ ಪ್ರತಿಭೆ united wander ಖ್ಯಾತಿಯ ಸಿನಾನ್ ಇವರಿಗೆ ಪುತ್ತೂರಿಗೆ ಆತ್ಮೀಯ ಸ್ವಾಗತ ಕೋರಿ ಇವರಿಗೆ ಹುಟ್ಟುರಿನಲ್ಲಿ ಸನ್ಮಾನ ಕಾರ್ಯಕ್ರಮವು ಗಾಂಧಿ ಕಟ್ಟೆ ಬಳಿ ನಡೆಯಿತು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುತ್ತೂರು ಮೂಲದ ಸಿನಾನ್ ಎಂಬ ಯುವಕ ಕಳೆದ 2 ವರ್ಷಗಳಿಂದ ತನ್ನ ಸ್ಕೋರ್ಪಿಯೋ ವಾಹನದಲ್ಲಿ ವಿಶ್ವ ಪರ್ಯಟನೆ ಮಾಡಿ ಡಿಸಂಬರ್.3 ರಂದು ತನ್ನ ತಾಯ್ನಾಡು ಪುತ್ತೂರಿಗೆ ಮರಳಿದ್ದಾರೆ.

ಸುಮಾರು ಎರಡು ವರ್ಷಗಳ ವರೆಗೆ ಒಟ್ಟು 67 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಸರಿ ಸುಮಾರು 1 ಲಕ್ಷ ಕಿ.ಮೀ ಗೂ ಹೆಚ್ಚು ಸ್ಥಳವನ್ನು ಸುತ್ತಿದ್ದಾರೆ. ಭಾರತದ ಹಾಗೂ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಿ ಪುತ್ತೂರಿಗೆ ಬರುವ ಸಲುವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ.

ಸುಮಾರು 68 ರಾಷ್ಟ್ರಗಳನ್ನು ಸಂಚರಿಸಿ, ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಾದ್ಯಂತ ಪಸರಿಸಿದ ಪುತ್ತೂರಿನ ಯುವ ಪ್ರತಿಭೆ united wander ಸಿನಾನ್ ಅವರಿಗೆ ಪುತ್ತೂರು ನಾಗರಿಕರ ಪರವಾಗಿ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 3 ರಂದು ನಡೆಯಿತು.