ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ 15 ಆದಿತ್ಯವಾರ ಆಚರಿಸಲಾಯಿತು.
ದಿವ್ಯ ಬಲಿಪೂಜೆಯನ್ನು ಗುರುಗಳಾದ ರೆ ಫಾ ಗ್ರೇಶನ್ ಅಲ್ವಾ ರೀಸ್ ನೆರವೇರಿಸಿ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಗುರುಗಳಾದ ವಂದನೀಯ ರೆ ಫಾ ಗ್ರೇಶನ್ ಅಲ್ವಾ ರೀಸ್, ಐ. ಸಿ. ವೈ. ಎಂ ಸಚೇತಕಿ ಸಿ ಲೀನಾ , ಚರ್ಚ್ ಪಾಲನ ಪರಿಷದ್ ಉಪಾಧ್ಯಕ್ಷ ಶ್ರೀ ಜೋನ್ ಮೊಂತೇರೋ , ಕಾರ್ಯದರ್ಶಿ ಜೆಸಿಂತಾ ಡಿಸೋಜಾ, ಸರ್ವ ಆಯೋಗದ ಸಂಚಾಲಕ ಪಾವ್ಲ್ ಡಿಸೋಜಾ, ಕಥೋಲಿಕ್ ಸಭಾ ಅಧ್ಯಕ್ಷೆ ನಿಶ್ಮಿತಾ ಡಿಸೋಜಾ, ಐ. ಸಿ.ವೈ. ಎಂ ಅಧ್ಯಕ್ಷ ಅಕ್ವಿಲ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ವತಿಯಿಂದ ನಡೆದ ಘಟಕ ಹಂತದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸಹಾಯ ಮಾಡಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಶ್ರೀಮತಿ ಜೆಸಿಂತಾ ಡಿಸೋಜಾ ಸ್ವಾಗತಿಸಿ ಅಕ್ವಿಲ್ ಡಿಸೋಜಾ ವಂದಿಸಿದರು. ಹಿತೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳ ಮೂರು ತಂಡ ಮಾಡಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಮನೊರಂಜನೆ ಏರ್ಪಡಿಸಲಾಯಿತು.
ಗೆದ್ದ ತಂಡಗಳಿಗೆ ಬಹುಮಾನ ನೀಡಲಾಯಿತು.ನಿಶ್ಮಿತಾ ಡಿಸೋಜಾ ನಿರೂಪನೆ ನಿರ್ವಹಿಸಿದರು.




