ಮೆಲಿಷ ಮಸ್ಕರೇನಸ್ ಇವರಿಗೆ " ಕರ್ನಾಟಕ ಸೇವಾರತ್ನ" ಕನ್ನಡ ರಾಜ್ಯೋತ್ಸವ ಪ್ರಶಸ್ತಿ

|

ಆರ್.ಪಿ. ಕಲಾ ಸೇವಾ ಟ್ರಸ್ಟ್ (ರಿ)ಪಾಂಬಾರು ಇವರು ನೀಡುವ ಕನ್ನಡ ರಾಜ್ಯೋತ್ಸವ 2026ರ "ಕರ್ನಾಟಕ ಸೇವಾ ರತ್ನ " ಪ್ರಶಸ್ತಿಗೆ, ಬಹುಮುಖ ಪ್ರತಿಭೆ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಮೆಲಿಷ ಮಸ್ಕರೇನಸ್ ಆಯ್ಕೆಯಾಗಿರುತ್ತಾರೆ. ಇಂದು ಜಾಲ್ಸೂರಿನ ಪಂಚಾಯತ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಈಕೆ ಪಡುಬೆಟ್ಟು ನಿವಾಸಿಗಳಾದ ಮನೀಶ್ ಮಸ್ಕರೇನಸ್ ಹಾಗೂ ನ್ಯಾನ್ಸಿ ಲಿಝಿ ದಂಪತಿಗಳ ಪುತ್ರಿ.