ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ, ಪುತ್ತೂರು ತಾಲೂಕು ಸಮಿತಿ,ದ.ಕ ಜಿಲ್ಲೆ ಇದರ ನೂತನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಯುಗಾದಿ ಪ್ರಯುಕ್ತ ವಿಶೇಷ ಕಾರ್ಯಕ್ರಮವು ಶ್ರೀ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಇಲ್ಲಿ ಜರುಗಿತು.
ನೆಲ್ಯಾಡಿಬಾಲಯೇಸು ದೇವಾಲಯದಲ್ಲಿ ಈಸ್ಟರ್ ಜಾಗರಣೆ ಪ್ರಾರ್ಥನೆ ಶನಿವಾರ ನಡೆಯಿತು.ಸಂಜೆ ವಿಶೇಷ ಪ್ರಾರ್ಥನವಿಧಿಯೊಂದಿಗೆ ಬಲಿಪೂಜೆ ಆರಂಭಗೊಂಡಿತು.
ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ನೆಲ್ಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ಯೇಸು ಕ್ರಿಸ್ತರು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನದ ನೆನಪನ್ನು ಸಾರುವ ಪವಿತ್ರ ಗುರುವಾರವನ್ನು ನೆಲ್ಯಾಡಿ ದೇವಾಲಯದಲ್ಲಿ ಆಚರಿಸಲಾಯಿತು.
ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ಪ್ರವೇಶಿಸಿದ ಸವಿನೆನಪಿಗಾಗಿ ಆಚರಿಸಲಾಗುವ ‘ಗರಿಗಳ ಭಾನುವಾರ’ವನ್ನು (Palm Sunday) ಇಂದು ಆಚರಿಸಲಾಯಿತು.
ಮಂಗಳೂರು: ಪವಿತ್ರ ರಮಝಾನ್ನ ವೃತಗಳನ್ನು ಅನುಷ್ಠಾನಗೊಳಿಸಿದ ಕರಾವಳಿಯ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು.
ನೆಲ್ಯಾಡಿ:ರಾಸಾಯನಿಕ ರಹಿತ (ಕೋಲ್ಡ್ ಪ್ರೆಸ್ಡ್ ಅಥವಾ ವರ್ಜಿನ್) ಹಾನಿಕಾರಕ ಸೇರ್ಪಡೆಗಳಿಲ್ಲದ, ನೈಸರ್ಗಿಕ ಪೋಷಕಾಂಶಗಳನ್ನು ಹೊಂದಿರುವ ಅತ್ಯುತ್ತಮ ತೆಂಗಿನ ಎಣ್ಣೆಯನ್ನು ನೀಡುವ ಉದ್ದೇಶದಿಂದ ನೆಲ್ಯಾಡಿಯ ವಿ ಜೆ ಕಾಂಪ್ಲೆಕ್ಸ್ ನಲ್ಲಿ ಅಮ್ಮಾಸ್ ಆಯಿಲ್ ಮಿಲ್ ಮಾ11 ರಂದು ಶುಭಾರಂಭಗೊಳ್ಳಲಿದೆ
ನೆಲ್ಯಾಡಿ ಬಾಲ ಯೇಸು ದೇವಾಲಯದಲ್ಲಿ ಕ್ರೈಸ್ತ ಶಿಕ್ಷಣ ದಿನ ಆಚರಣೆ ಮಾರ್ಚ್
ಸಂತ ಜೋನರ ದೇವಾಲಯ, ಕೊಕ್ಕಡಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದಿನಾಂಕ 31-01-2026 ಮತ್ತು 01-02-2026 ರಂದು ಅಧಿಕೃತ ಭೇಟಿಯನ್ನು ನೀಡಿದರು.
ನೆಲ್ಯಾಡಿ ಬಾಲಯೇಸು ದೇವಾಲಯದ ವಾರ್ಷಿಕ ಹಬ್ಬ ಜನವರಿ 14 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳೂರು, ಡಿ. 22 ನವ ಮಂಗಳೂರು ಬಂದರು ಪ್ರಾಧಿಕಾರ (NMPA) 2025–26ರ ಕ್ರೂಸ್ ಋತುವಿನ ಆರಂಭಕ್ಕೆ ಅಧಿಕೃತ ಚಾಲನೆ ನೀಡಿದ್ದು, ಮೊದಲ ಐಷಾರಾಮಿ ಕ್ರೂಸ್ ಹಡಗು ಎಂಎಸ್ ಸೆವೆನ್ ಸೀಸ್ ನ್ಯಾವಿಗೇಟರ್ ಶನಿವಾರ ಮಂಗಳೂರಿಗೆ ಆಗಮಿಸಿದೆ. ಹಡಗು ಬೆಳಿಗ್ಗೆ 6.15ಕ್ಕೆ ಬಂದರು ತಲುಪಿದ್ದು, 7.15ಕ್ಕೆ ಬರ್ತ್ ಸಂಖ್ಯೆ-4ರಲ್ಲಿ ಲಂಗರು ಹಾಕಿತು.
ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ಮಾತನಾಡುತ್ತಾ "1949ರ ನವಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಇವರ ನಾಯಕತ್ವದಲ್ಲಿ ಸಂವಿಧಾನವು ಮೂಡಿಬಂದಿದೆ. ಈ ಸಂವಿಧಾನದ ಕಾರಣದಿಂದಾಗಿ ನನ್ನ ರಾಷ್ಟ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾವೆಲ್ಲರೂ ಕೂಡ ಸಂವಿಧಾನದ ಅಧ್ಯಯನವನ್ನು ಮಾಡಬೇಕು." ಎಂದು ಹೇಳಿದರು. ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕಿಯರಾದ ಶ್ರೀಮತಿ ಲಾವಣ್ಯ, ಶ್ರೀಮತಿ ಶ್ರೀನಿಧಿ ಮತ್ತು ಕುಮಾರಿ ಸ್ನೇಹ ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಎಂ ಸಹಕರಿಸಿದರು.